ಬಹು ಬೇಡಿಕೆಯ ತುಮಕೂರು-ಅರಸೀಕೆರೆ ಜೋಡಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಇಲಾಖೆ ಒಪ್ಪಿಗೆ ನೀಡಿದೆ. ಸುಮಾರು 347 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು, 2015ರ ಅಕ್ಟೋಬರ್ ವೇಳೆಗೆ ಆರಂಭವಾಗುವ ಸಾಧ್ಯತೆ ಇದೆ. ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸುವ ಬಗ್ಗೆ ಸಮೀಕ್ಷೆ ನಡೆಸಿ ಇಲಾಖೆಗೆ ವರದಿಯನ್ನು ನೀಡಲಾಗಿತ್ತು. ರೈಲ್ವೆ ಬಜೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು 21 ಕೋಟಿ ಅನುದಾನ ಮೀಸಲಾಗಿಡಲಾಗಿದೆ. ಸುಮಾರು 96 ಕಿ.ಮೀ. ನಡುವಿನ ಈ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಮಾಡಲು ತಗಲುವ ವೆಚ್ಚ ಸೇರಿದಂತೆ ಯೋಜನೆಯ ವಿಸ್ತ್ರೃತ ವರದಿಯನ್ನು ತಯಾರಿಸಿ ರೈಲ್ವೆ ಇಲಾಖೆ ಮಾ.20ರಂದು ಸಲ್ಲಿಕೆ ಮಾಡಲಾಗಿತ್ತು. ಇದನ್ನು ಪರಿಶೀಲನೆ ನಡೆಸಿದ ಬಳಿಕ ಕಾಮಗಾರಿ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. [ರೈಲ್ವೆ ಬಜೆಟ್ ಮುಖ್ಯಾಂಶಗಳು] ಯೋಜನೆ ಎಲ್ಲಾ ಕಾರ್ಯಗಳು, ನಕ್ಷೆ ಮುಂತಾದ ಪ್ರಕ್ರಿಯೆಗಳು 2015ರ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿ ಆರಂಭವಾದರೆ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ. ಅರಸೀಕೆರೆ-ತುಮಕೂರು ಮಾರ್ಗದಲ್ಲಿ ಹಲವಾರು ರೈಲುಗಳು ಸಂಚಾರ ನಡೆಸಲಿದ್ದು ಜೋಡಿ ಮಾರ್ಗದ ಅಗತ್ಯವಿತ್ತು. ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿತ್ತು.
No comments:
Post a Comment