Friday, 2 December 2011

ನಗರ ಸಾರಿಗೆ: 2200 ಲೀ. ಪೆಟ್ರೋಲ್ ಉಳಿತಾಯ


ತುಮಕೂರು: ಮುಂದಿನ ದಿನಗಳಲ್ಲಿ ನಗರ ಬಸ್ ನಿಲ್ದಾಣದಿಂದ ದಿಬ್ಬೂರು ಮತ್ತು ಬೆಳ್ಳಾವಿಗೆ ನಗರ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ  ಎಸ್.ಶಿವಣ್ಣ ಹೇಳಿದರು.

ಕೆಎಸ್‌ಆರ್‌ಟಿಸಿ ಈಚೆಗೆ ನಡೆಸಿದ ಪ್ರಯಾಣಿಕರ ಸಮೀಕ್ಷೆ ಮಾಹಿತಿ ನೀಡಿದ ಅವರು, ಅಗತ್ಯ ಸಂಪನ್ಮೂಲ ಕ್ರೋಡೀಕರಿಸಿಕೊಂಡು ಹಂತಹಂತವಾಗಿ ನಗರ ಸಾರಿಗೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು.

ಪ್ರತಿದಿನ 41 ನಗರ ಸಾರಿಗೆ ವಾಹನಗಳು, 46 ಸಾವಿರ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ನಗರ ಸಾರಿಗೆ ಸೇವೆ ಪ್ರಾರಂಭವಾದ ನಂತರ ಪ್ರಯಾಣಿಕರಿಗೆ ಪ್ರಯಾಣ ವೆಚ್ಚದಲ್ಲಿ ಶೇ. 20ರಷ್ಟು ಉಳಿತಾಯವಾಗಿದೆ. ಶೇ. 50ರಷ್ಟು ಪ್ರಯಾಣಿಕರು ಪ್ರಯಾಣ ವೆಚ್ಚ ಕಡಿಮೆ ಎಂಬ ಕಾರಣದಿಂದಾಗಿ ನಗರಸಾರಿಗೆ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಹೇಳಿದರು.

ನಗರ ಸಾರಿಗೆ ಪ್ರಾರಂಭವಾದ ಮೇಲೆ ಶೇ. 7.5ರಷ್ಟು ನಗರ ವಾಸಿಗಳು ದ್ವಿಚಕ್ರ ವಾಹನ ಬಳಕೆ ನಿಲ್ಲಿಸಿದ್ದಾರೆ. ಪ್ರತಿದಿನ 2200 ಲೀಟರ್ ಪೆಟ್ರೋಲ್ ಬಳಕೆ ಕಡಿಮೆಯಾಗಿದೆ ಎಂದು ವಿವರಿಸಿದರು

No comments:

Post a Comment